ರಾಯಲ್ ಎನ್‌ಫೀಲ್ಡ್ ಕಂಪನಿಯು ಹಿಮಾಲಯನ್ ಸ್ಕ್ರಾಮ್ 411 ಹೊಸ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಮಾದರಿಯು ಮೂಲ ಹಿಮಾಲಯನ್ ಅಡ್ವೆಂಚರ್-ಟೂರರ್ ಅನ್ನು ಆಧರಿಸಿದೆ. ಹೊಸ ಬೈಕಿನಲ್ಲಿ ಸಣ್ಣ ಗಾತ್ರದ ಚಕ್ರ ಸೇರಿದಂತೆ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್‌ಗೆ ಸರಿಹೊಂದುವಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಹೊಸ ಬೈಕ್ ಕಾರ್ಯಕ್ಷಮತೆ ಕುರಿತಂತೆ ಕಂಪನಿಯು ಇತ್ತೀಚೆಗೆ ಕರ್ನಾಟಕದ ಕೋಲಾರದಲ್ಲಿರುವ ಬಿಗ್‌ರಾಕ್ ಡರ್ಟ್‌ಪಾರ್ಕ್‌ನಲ್ಲಿ ಹೊಸ ಸ್ಕ್ರಾಂಬ್ಲರ್ ಮೋಟಾರ್‌ಸೈಕಲ್ ಟೆಸ್ಟ್ ರೈಡ್ ಆಯೋಜಿಸಿತ್ತು. ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸ್ಕ್ರಾಮ್ 411 ಮಾದರಿಯು ಹಲವಾರು ಗುರುತರ ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದ್ದು, ಹೊಸ ಬೈಕ್ ಕುರಿತಂತೆ ಮತ್ತಷ್ಟು ಮಾಹಿತಿಗಳನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.